ದೆಹಲಿಃ ಒಂಬತ್ತು ವರ್ಷದ ಹುಡುಗಿಯನ್ನು 13 ವರ್ಷದ ಸ್ನೇಹಿತ ನಿರಂತರವಾಗಿ ಅತ್ಯಾಚಾರಗೊಳಿಸಿದ್ದು, ದಕ್ಷಿಣ ದೆಹಲಿಯ ನಿವಾಸದಿಂದ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಬುಧವಾರ ಮಧ್ಯಾಹ್ನ ಹುಡುಗಿ ಹೊಟ್ಟೆ ನೋವಿನ ಬಗ್ಗೆ ದೂರು ನೀಡಿದಾಗ ಈ ಘಟನೆ ಬೆಳಕಿಗೆ ಬಂದಿತು. ಆಕೆಯು ತನ್ನ ನೆರೆಹೊರೆಯಲ್ಲಿ ವಾಸಿಸುತ್ತಿದ್ದ 13 ವರ್ಷದ ಸ್ನೇಹಿತನಿಂದ ಅನೇಕ ದಿನಗಳವರೆಗೆ ಅತ್ಯಾಚಾರಕ್ಕೀಡಾಗಿದ್ದಾಳೆಂದು ಆಕೆಯ ಪೋಷಕರಿಗೆ ತಿಳಿಸಿದಳು.
ಇದನ್ನೂ ಓದಿ ಃ ಜಾಸ್ತಿ ಮಾರ್ಕ್ಸ್ ಪಡೆದ ಹುಡುಗಿಯ ನೀರಿನ ಬಾಟಲಿಗೆ ವಿಷ ಹಾಕಿದ ಹುಡುಗಿ
ಆರೋಪಿ ಬಾಲಕ ತನ್ನ ಪೋಷಕರ ಜೊತೆ ಗೋವಿಂದ ಪುರಿಯಲ್ಲಿರುವ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದು, ಸರ್ಕಾರಿ ಶಾಲೆಯಲ್ಲಿ 7 ನೇ ತರಗತಿಯಲ್ಲಿ ಅಧ್ಯಯನ ನಡೆಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯ ವೇಳೆ, ಆಕೆಯ ಪೋಷಕರು ಕೆಲಸಕ್ಕೆ ಹೊರಟ ನಂತರ ಆಟ ಆಡುವ ನೆಪದಲ್ಲಿ ಆರೋಪಿ, ಹುಡುಗಿಯ ಮನೆಗೆ ಪ್ರವೇಶಿಸುತ್ತಿದ್ದನೆಂದು ಪತ್ತೆಯಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. "ಬಾಲಕಿಯನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಮತ್ತು ಅವಳ ಹೇಳಿಕೆಯನ್ನು ಶುಕ್ರವಾರ ದಾಖಲಿಸಲಾಗುತ್ತದೆ." ಎಂದಿದ್ದಾರೆ.
ಹುಡುಗಿಯ ತಂದೆಯ ಪ್ರಕಾರ: "ನಾನು ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ ಮತ್ತು ನನ್ನ ಹೆಂಡತಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಳೆ ನಾವು ನಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಮತ್ತು ಮಗನನ್ನು ನನ್ನ ತಂದೆಯ ಜೊತೆ ಮನೆಯಲ್ಲೇ ಬಿಟ್ಟು ಹೋಗುತ್ತಿದ್ದೆವು, ನನ್ನ ತಂದೆಗೆ ವಯಸ್ಸಾಗಿದ್ದು, ಅವರಿಗೆ ನಡೆಯಲಾಗುತ್ತಿಲ್ಲ." ಎಂದರು. "ಅಜ್ಜ ಮನೆಯ ಹೊರಗೆ ಒಂದು ಬೆಡ್ ನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು, ಆ ಹುಡುಗನು ನಮ್ಮ ಮನೆಯೊಳಗೆ ಆಟ ಆಡುವ ನೆಪದಲ್ಲಿ ಪ್ರವೇಶಿಸುತ್ತಿದ್ದನು ಮತ್ತು ಮಗಳು ಒಬ್ಬಳೇ ಇದ್ದಾಗ ಅವಳನ್ನು ಅತ್ಯಾಚಾರ ಮಾಡುತ್ತಿದ್ದನು" ಎಂದು ಅವರು ಹೇಳಿದರು.
ಇದನ್ನೂ ಓದಿ ಃ "ಯಾರಾದರೂ 'ಅಲ್ಲಾಹು ಅಕ್ಬರ್' ಎಂದು ಕಿರುಚಿದರೆ ಶೂಟ್ ಮಾಡಲಾಗುವುದು"
ಅರೋಪಿಯನ್ನು ಬಾಲಾಪರಾಧಿಗಳ ಜೈಲಿಗೆ ಕಳುಹಿಸಲಾಗಿದೆ.

ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.